ಸಲಗ ವಿಜಯ್ ಕುಮಾರ್ ನಿರ್ದೇಶಿಸಿ ನಟಿಸ್ತಿರೋ ಭೀಮ ಚಿತ್ರ ಮುಕ್ತಾಯ ಕುಂಬಳಕಾಯಿ ಹೊಡೆಯಲಾಗಿದೆ.
Posted date: 20 Wed, Dec 2023 04:51:23 PM
ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್ ನಿರ್ದೇಶಿಸಿ ನಟಿಸ್ತಿರೋ ಭೀಮ ಚಿತ್ರದ ಚಿತ್ರೀಕರಣ ‌ಮುಕ್ತಾಯವಾಗಿದೆ.
ಭೀಮ ಚಿತ್ರವನ್ನ ರಿಯಲಿಸ್ಟಿಕ್ ಆಗಿ ಚಿತ್ರೀಕರಿಸ್ತಿರೋ ವಿಜಯ್,
 
ಮಧ್ಯರಾತ್ರಿ ಬೆಂಗಳೂರಿನ ವಿನೋಬನಗರದ ಗಲ್ಲಿಗಳಲ್ಲಿ ಕೊನೆಯ ಸೀನ್ ಶೂಟ್ ಮಾಡೋ ಮೂಲಕ ಕುಂಬಳಕಾಯಿ ಹೊಡೆಯಲಾಗಿದೆ.

ಈ ವೇಳೆ ಮಾಧ್ಯಮ ಮಿತ್ರರರನ್ನ ಕರೆದುಕೊಂಡು ಇಡೀ ಭೀಮನ ಏರಿಯಾವನ್ನ ಕಾಲ್ನಡಿಗೆಯಲ್ಲಿ ಸುತ್ತಿಸಿದ ವಿಜಯ್ ಭೀಮ ಚಿತ್ರವನ್ನ ಚಿತ್ರೀಕರಿಸಿದ ಜಾಗಗಳನ್ನ ಪರಿಚಯಿಸಿದ್ದು ವಿಶೇಷವಾಗಿತ್ತು.

ಇಡೀ ಭೀಮ ಚಿತ್ರತಂಡ ಈ ಸಂದರ್ಭದಲ್ಲಿ ಭಾಗಿಯಾಗಿತ್ತು. ಆರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ವಿಶೇಷವಾಗಿ ಸುದ್ದಿಯಾಗ್ತಿರೋ ಭೀಮ ಕೊನೆ ಸೀನ್ ಶೂಟಿಂಗ್ ವೇಳೆಯೂ ಆ ವಿಶೇಷಯನ್ನ ಕಾಪಾಡಿಕೊಂಡಿದೆ.

ಈಗಾಗ್ಲೇ ಎರಡು ಸೂಪರ್ ಹಿಟ್‌ಹಾಡುಗಳನ್ನ ರಿಲೀಸ್ ಮಾಡಿರೋ ಭೀಮ ಸದ್ಯದಲ್ಲೇ ಚಿತ್ರದ ಮತ್ತಷ್ಟು ಮಾಹಿತಿ‌ ಕೊಡಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed